Friday, April 16, 2010

ಸ್ನೇಹಿತರು

ಚುಕ್ಕಿಗಳು ನಾವು ಸುಳಿದರೆ ಹಕ್ಕಿಗಳು ನಾವು
ಕಾರ್ಮೋದಕ್ಕೆ ಹಾರುವ ಗಾಳಿಪಟಗಳು ನಾವು |
ಮಿಂಚನ್ನು ಹಿಡಿದು ಬೆಳಗುವೆವು ನಾವು
ಸಂತೋಷದ ಮಳೆಯ ಹರಿಸುವೆವು ನಾವು ||

ಮಿತ್ರರೇ ಇಂದು ನಮಗೆಲ್ಲ ಬಂಧುಗಳು
ಬಿಡಿಸುವೆವು ಬಾಳಿನ ಹರ್ಷದ ಚಿತ್ರಗಳು|
ನೋವಿನ ನಲಿವಿನ ಈ ನಮ್ಮ ಕಂಗಳು
ತೊಡುವೆವು ಬದುಕಿನ ದಾರಿಯ ಸುರಂಗಗಳು ||

ಒಲವೆಲ್ಲ ಇಂದು ನಮಗೆ ಗೆಲುವಾಗಿ ಬಂದು
ಒಗ್ಗಟ್ಟು ನಮಗಿಂದು ಚಲವಾಗಿ ನಿಂದು |
ನಂಬಿಕೆಯು ಎಲ್ಲವೂ ಬಳಿಯಲ್ಲೇ ಅಂದು
ಸ್ನೇಹ ಒಂದೇ ನಮಗೆ ಶಕ್ತಿಯಂತು ಇಂದು ||

No comments:

Post a Comment